Posts

Showing posts from 2007

ಒಂದು ಕೋಳಿಯ ಕಥೆ

ಇದು ನನ್ನ ಚಿಕ್ಕಂದಿನಲ್ಲಿ ನಡೆದ ಘಟನೆ. ಈ ಘಟನೆ ಪದೇ ಪದೇ ನನ್ನ ಮನಸಿನ ಪುಟಗಳ ನಡುವೆ ಸುಳಿದಾಡುತ್ತಿರುತ್ತದೆ. ನನ್ನ ಜೀವನದಲ್ಲಿ ನಡೆದ ಅತ್ಯಂತ ಸ್ವಾರಸ್ಯಕರ ಘಟನೆ ಎಂದು ಹೇಳಬಹುದು. ನನ್ನ ಹುಟ್ಟೂರು ಚಿತ್ರದುರ್ಗ. ನಾನು ಆಗ ಬಹುಶಃ ೩ನೇ ತರಗತಿಯಲ್ಲಿದ್ದೆ. ಬೇಸಿಗೆ ರಜೆ ಇತ್ತು. ಬೇಸಿಗೆ ಬಂತೆಂದರೆ ಸಾಕು,ನನ್ನ ಮಾವನ ಮಕ್ಕಳಾದ ವಿನಯ ಮತ್ತು ಉದಯ ರೊಂದಿಗೆ ಬೆಳಗಿನಿಂದ ಸಂಜೆಯವರೆಗೂ ಆಟವಾಡುವುದೇ ಪರಿಪಾಠವಾಗಿರುತ್ತಿತ್ತು. ಒಂದು ದಿನ ಬೆಳಿಗ್ಗೆ ಅವರ ಮನೆಗೆ ಹೋದೆ. ಅಂದು ಏಕೋ ಇಬ್ಬರೂ ಮನೆಯಲ್ಲಿ ಇರಲಿಲ್ಲ (ಅವರೆಲ್ಲಿ ಹೋಗಿದ್ದರು ಎಂದು ಇಂದಿಗೂ ನನಗೆ ಜ್ಞಾಪಕವಿಲ್ಲ). ಸರಿ. ಕೂತೆ,ನಿಂತೆ,ಮನೆಯಲ್ಲಿದ್ದವರೆಲ್ಲರ ಜೊತೆಯಲ್ಲೂ ಮಾತನಾಡಿದೆ. ನನ್ನ ಅತ್ತೆ ಅಂದು ಬೆಳಗ್ಗೆ ಮಾಡಿದ ತಿಂಡಿ ಕೊಟ್ಟರು,ತಿಂದೆ. ಅವರಿಬ್ಬರು ಇದ್ದಿದ್ದರೆ ಮನೆಯಲ್ಲಿದ್ದವರೊಡನೆ ಅಷ್ಟು ಸಮಯ ಕಳೆಯುತ್ತಲೇ ಇರಲಿಲ್ಲ. ಟಿ.ವಿ.ನೋಡೋಣ ಎಂದು ಕುಳಿತರೆ ಆ ಸಮಯದಲ್ಲಿ ಆ ಟಿ.ವಿ ತುಂಬಾ ನನ್ನ ಬೇಜಾರು ಇಮ್ಮಡಿಗೊಳಿಸುವಂತಹ ಘನಕಾರಿ ಕಾರ್ಯಕ್ರಮಗಳೇ ತುಂಬಿಕೊಂಡಿದ್ದವು. ಅವರು ಏಷ್ಟು ಹೊತ್ತಾದರೂ ಹಿಂದಿರುಗಲಿಲ್ಲ. ಒಟ್ಟಿನಲ್ಲಿ ಅಂದು ನನಗೆ ರುಚಿಸುವಂತಹದ್ದು ಏನೂ ಇರಲಿಲ್ಲ ಅಲ್ಲಿ. ಹಾಗೆ ಕೆಲ ಕಾಲ ಕಳೆಯಿತು. ಬೇಜಾರು ತಾಳಲಾರದೆ ಹೊರಗೆ ನಿಲ್ಲೋಣ ಎನಿಸಿತು. ಅವರು ಬರುವುದನ್ನೇ ಏದುರು ನೋಡುತ್ತಾ ನಿಂತೆ. ಇದ್ದಕ್ಕಿದ್ದಂತೆ ಒಂದು ಕೋಳಿ ಹಾಗೇ ನನ್ನ ಮುಂದೆ ವೇಗವಾಗಿ ಹಾದು ಹ