Posts

Showing posts from September, 2010

"ಗಳು ಗಳು" ಪಂಚರಂಗಿ ಅನಿಸಿಕೆ"ಗಳು"

ಕ್ರಿಯಾಪದವೇ ಇರದ "ಗಳು ಗಳು" ಎಂಬ ಉದ್ದುದ್ದ ಕವಿತೆಯ ವಿಸ್ತೃತ ರೂಪಗಳು, ಪಂಚರಂಗಿಯ ಚಿತ್ರಕಥೆಯ ಎಳೆಗಳು, ದಿಗಂತನ ೨ಕಿಲೋ ದೂಧ್ ಪೇಡಾ ನಗೆಗಳು, ನಿಧಿ ಸುಬ್ಬಯ್ಯಳ ನುಲಿದಾಟದ ನಡುವಿನ ಅಭಿನಯಗಳು, ವಿಪರೀತ ಮೊನಚು ಮಾತುಗಳು, ಕೊನೆಯಲ್ಲಿ ಪೂರ್ಣವಿರಾಮದ ಬದಲಿಗೆ ಪಂಚುಗಳು, ಕಥಾನಾಯಕನ ಅಡ್ಡಕಸುಬಿ ವೃತ್ತಿಗಳು, ಎಲ್ಲರ ಕಣ್ಣಿಗೆ ಕಾಲಕಸಗಳು, ಆದರೂ ಬಾಯ ತುಂಬಾ ಸರಳ ತತ್ವಗಳು, ಜಗತ್ತಿಗೊಂದಿಷ್ಟು ಉಡಾಫೆಗಳು ಮತ್ತೊಂದಷ್ಟು ಮೂದಲಿಕೆಗಳು, ಹುಡುಗಿಯರ ಕಾಲೆಳಿಯುವ ಕಿಸಿಕಿಸಿ ವಿಟ್ಟುಗಳು, ಅವರ ಮದುವೆಯ ರಿಕ್ವೈರ್ಮೆಂಟುಗಳು, ತಂದೆ ತಾಯಂದಿರ ಉಗಿತಗಳು, ಹುಡುಗಿಯರ ಎಳಸು ಆಟಗಳು, ನೆಗೆ ನೆಗೆದು ಬರುವ ನಗಿಸಿ ನೆಗೆಸುವ ಗೂಢಾರ್ಥದ ಜೋಕುಗಳು, ಹಿನ್ನೆಲೆಯಲ್ಲಿ ಭಟ್ಟರ ಹ್ಞೂಂ ಕಾರಗಳು, ದಿಗಂತನ ಮುಖದ ಕಿವುಚುಗಳು, ನಿಧಿಯ ಮುರುಕು ಕನ್ನಡ ಪದಗಳು, ಜಯಂತರ ಚೊಚ್ಚಲ ಅಭಿನಯದಲ್ಲಿ ಕಿರುನಗೆಯ ಹೊಳಪುಗಳು, ಸರಿದಾಡಿವೆ ಹಾಡುಗಳಲಿ ನೂತನ ರೂಪಕಗಳು, ಸೀರೆಗಳನು ನೇಯ್ದ ಬೆಳಕುಗಳು, ಕಣ್ಣಲಿ ಗೋಚರಿಸಿದ ಕಾಗುಣಿತಗಳು, ಇಡೀ ಎರಡುವರೆ ತಾಸು ಅಲ್ಲಲ್ಲಿ ಇಣುಕುವುವು ಬದುಕಿನ ಲಿಮಿಟ್ಟುಗಳು, ಪರೀಕ್ಷೆಯ ಫಲಿತಾಂಶದಂಥ ಮಧ್ಯಂತರಗಳು, ಮೈ ಮುರಿಯುವ ಟಾಕೀಸ್ ಸೀಟುಗಳು, ಟೆಲಿಗ್ರಾಮಿನಂತೆ ಎರಗಿಬಿಡುವ ಕಥೆಯ ತಿರುವುಗಳು, ಸಮುದ್ರದ ಅಲೆಗಳು, ತೀರದಲಿ ಮರಳುಗಳು, ಮರಳಿನಲಿ ಗಜಿ ಬಿಜಿ ಮಾತುಗಳು, ಕಿರಿ ಕಿರಿಗಳು, ಕಂಯ ಕಂಯಗಳು, ಖೊ ಖೊ ಖೊಗಳು, ಗುಂಡಿ ತೋಡಿದ ಸಂ