Posts

Showing posts from November, 2008

ಹೊಸ ನೀರಿದ್ದರೂ ಹೊಸ ಬೆಳೆಯಿಲ್ಲ

ಇತ್ತೀಚಿಗೆ ದೇವರಾಯನದುರ್ಗದಲ್ಲಿ ಕನ್ನಡ ಸಾಹಿತ್ಯ . com ನ ಅಂಗವಾದ ಸಂವಾದ.com ನವರು ನಾಡಿನ ಪ್ರತಿಭಾವಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ ಎರಡು ದಿನಗಳ ಸಿನೆಮಾ ಕುರಿತ ರಸಗ್ರಹಣ ಶಿಬಿರವನ್ನು ಆಯೋಜಿಸಿದ್ದರು. ಅದರ ಪ್ರಯುಕ್ತ "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ - ನನಗೆಂಥ ಸಿನೆಮಾ ಬೇಕು" ಎನ್ನುವ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಇಟ್ಟಿದ್ದರು. ಈ ಸಮಾಚಾರ ತಿಳಿದ ಕೂಡಲೆ ನನ್ನ ಸಾಹಿತ್ಯಾಭಿಮಾನಿ ಗೆಳೆಯ ಚರಣ ನಿಗೆ ತಿಳಿಸಿದೆ. ಚರಣ ತುಂಬಾ ಉತ್ಸುಕನಾಗಿ ಪ್ರಬಂಧ ಬರೆದು ಕಳುಹಿಸಿದ. ಮತ್ತೂ ಖುಷಿ ಕೊಟ್ಟ ವಿಚಾರವೆಂದರೆ ಅದಕ್ಕೆ ಪ್ರಥಮ ಬಹುಮಾನವೂ ಬಂತು. ಕಾಲದ ಪರಿಮಿತಿಯಲ್ಲಿ ನನಗೆ ಬರೆಯುವುದು ಸ್ವಲ್ಪ ಕಷ್ಟವೆನಿಸಿತಾದರೂ ಅದಕ್ಕಿದ್ದ ಕಾಲಾವಕಾಶ ಅಲ್ಪವೇನಿರಲಿಲ್ಲ. ಆಲಸ್ಯವೋ ಏನೋ ನಾನಂತೂ ಪ್ರಬಂಧ ಬರೆಯುವುದರ ಬಗ್ಗೆ ಉದ್ಯುಕ್ತ ನಾಗಲಿಲ್ಲ. ಸ್ಪರ್ಧೆಗೆ ಕಳುಹಿಸಲಾಗದಿದ್ದರೇನಂತೆ ನಿಧಾನವಾಗಿ ಬರೆಯೋಣ ಎಂದುಕೊಂಡೆ. ಕಡೆಗೂ ನನಗೆ ತೋಚಿದ್ದನ್ನು ಬರೆದು ಮುಗಿಸಿದ್ದೇನೆ. ಸ್ಪರ್ಧೆ ಗೆ ಕಳುಹಿಸದಿದ್ದರೂ ಬರೆದ ಸಂತೃಪ್ತಿ ಇದೆ. ವಿಷಯದ ವ್ಯಾಪ್ತಿ ದೊಡ್ಡದಿದೆ ಹಾಗೂ ಗಂಭೀರವಾಗಿದೆ. ನನಗಿರುವ ಸಿನೆಮಾ ಅಭಿರುಚಿ ಮತ್ತು ಬೆಳ್ಳಿಯ ಪರದೆಯ ಮೇಲಿನ ವ್ಯಾಮೋಹಗಳ ಆಧಾರದ ಮೇಲೆ ಈ ಬರಹವನ್ನು ರೂಪಿಸಿದ್ದೇನೆ. ನನ್ನ ದೃಷ್ಟಿ ಕೋನದಲ್ಲೇನಾದರೂ ಅಭಾಸಗಳು ಅಥವಾ ಸಂಕುಚಿತತೆಯುಳ್ಳ ಅಂಶಗಳು ಇದ್ದಲ್ಲಿ ಮುಕ್ತವಾಗಿ