Posts

Showing posts from September, 2012

ಬರ್ಫಿ - ಮುಗ್ಧ ಪ್ರೇಮದ ಹಲವು ಮುಖಗಳು

Image
ದೈಹಿಕ/ಮಾನಸಿಕ ದೌರ್ಬಲ್ಯಗಳುಳ್ಳ ಪಾತ್ರಗಳನ್ನೇ ಕೇಂದ್ರವಾಗಿರಿಸಿಕೊಂಡು ಬಾಲಿವುಡ್‍ನಲ್ಲಿ ಸಾಕಷ್ಟು ಚಿತ್ರಗಳು ಬಂದಿದ್ದರೂ, ಅವುಗಳಲ್ಲಿ ಪರಿಣಾಮಕಾರಿ ಕಥನ ಮತ್ತು ನಿರೂಪಣೆಯುಳ್ಳ ಚಿತ್ರಗಳು ಬೆರಳೆಣಿಕೆಯಷ್ಟು."ಸದ್ಮಾ" ಚಿತ್ರದಲ್ಲಿನ ಶ್ರೀದೇವಿ ಮತ್ತು ಕಮಲ್ ಹಾಸನ್ ರ ಅಭಿನಯವನ್ನು ಜನರು ಇಂದಿಗೂ ಮೆಚ್ಚುಗೆಯಿಂದ ನೆನೆಸಿಕೊಳ್ಳುತ್ತಾರೆ. "ಪಾ", "ಮೈ ನೇಮ್ ಈಸ್ ಖಾನ್"‍ನಂಥ ಚಿತ್ರಗಳು ಬಂದಿವೆಯಾದರೂ ಅವುಗಳಲ್ಲಿನ "ದೌರ್ಬಲ್ಯ ಪೀಡಿತ" ಪಾತ್ರಗಳು ಆಪ್ತವಾಗಿ ಉಳಿಯಲಿಲ್ಲ. "ಘಜಿನಿ" ಚಿತ್ರದಲ್ಲಿ ನೆನಪು-ಮರೆವುಗಳ ನಡುವೆ ಸಿಲುಕಿ ತಲ್ಲಣಿಸುವ ಪಾತ್ರವಿದ್ದರೂ, ಪ್ರೇಯಸಿಯ ಸಾವಿನ ಸೇಡಿನ ವೈಭವೀಕರಣ ಪಾತ್ರದ ಬೇರೆ ವೈಶಿಷ್ಟ್ಯಗಳನ್ನು ಮಾಸಲುಗೊಳಿಸಿತ್ತು. ಆದರೂ ಇತ್ತೀಚಿನ "ತಾರೆ ಝಮೀನ್ ಪರ್" ಮತ್ತು ಸುಮಾರು ಒಂದು ದಶಕದ ಹಿಂದೆ ತೆರೆಕಂಡಿದ್ದ "ಬ್ಲಾಕ್" ಚಿತ್ರಗಳು ಈ ನಿಟ್ಟಿನಲ್ಲಿ ಪ್ರಶಂಸೆ ಹಾಗೂ ಮೆಚ್ಚುಗೆ ಪಡೆದ ಚಿತ್ರಗಳು. ಮಾರುಕಟ್ಟೆಯ ಸೂತ್ರಗಳಿಗೆ ತಕ್ಕ ರಂಜಕ ಗುಣಗಳ ಮೇಲೆಯೇ ಪ್ರಾಶಸ್ತ್ಯ ನೀಡುವುದರಿಂದಲೋ ಅಥವಾ ಥಳುಕು-ಬಳುಕು, ತಾರಾ ವರ್ಚಸ್ಸು, ನಾಟಕೀಯತೆ, ವೈಭವೀಕರಣಗಳ ವಿಪರೀತ ವ್ಯಾಮೋಹದಿಂದಲೋ ಬಹುತೇಕ ನಿರ್ದೇಶಕರು ಸಿನೆಮಾದ ಸಿದ್ಧ ಮಾದರಿಗಳಿಗೆ ಶರಣಾಗಿರುವುದಂತೂ ಸುಳ್ಳಲ್ಲ. ಎರಡು ವಾರಗಳ ಕೆಳಗೆ ಬಿಡುಗಡೆಗೊಂಡಿರುವ "ಬರ್ಫಿ&qu

ಮಾತು-ಮೌನ-ಮನಸ್ಸು

ಮಾತು ಮಾತುಗಳ ನಡುವೆ ಅದೆಲ್ಲಿಂದ ಬಂದು ಕೂರುವುದೊ ಕ್ರೂರ ಮೌನದ ಪದರ!? ಯಾವ ಮುಲಾಜೂ ಇಲ್ಲ ಯಾವ ದನಿಯೂ ಬೇಕಿಲ್ಲ ಅದಕೆ! ನಲ್ಮೆಯ ಮಾತು, ಕೋಪದ ಮಾತು ಸವಿ ನುಡಿ ಕಹಿ ನುಡಿ ಹೇಳಲೇ ಬೇಕೆಂದಿದ್ದ ಬಾಯಿ, ಆಲಿಸಲೆಂದೇ ಕಾದಿದ್ದ ಕಿವಿಗಳು ಎಲ್ಲವನೂ ಹೆಡೆಮುರಿಕಟ್ಟಿ ಹೊಸಕಿ ನಿಲ್ಲುತ್ತದೆ! ಮೌನಕೂ ಇರಬೇಕಿತ್ತು ಅಂತಃಕರಣ! ಕಾರಿರುಳ ಕತ್ತಲೆಯ ಬೆಂಬಲಕೆ ನಿಂತ ದುರುಳ ಗಾಳಿ ಹಚ್ಚಲು ಹೊರಟ ಹಣತೆಯ ಬಲಿತೆಗೆದುಕೊಳ್ಳುವುದು ಇಲ್ಲೂ, ಚೀತ್ಕಾರವೆಲ್ಲ ಆಕಾಶದೊಳು ಲೀನವಾಗುತಿರಲು ದೈನ್ಯದಲೆ ಬೇಡಲು ಹೊರಟ ಮಾತಿನ ಪ್ರಾಣಪಕ್ಷಿ ಹಾರಿಸಲು ಮೌನಕೆ ಬಿಗುಮಾನ ಜೊತೆಯಾಗಿದೆ ಆಕಾಶದ ವಿಸ್ತಾರಕೆ ಮೋಡಗಳು ಹೆದರುವುದುಂಟೆ! ಎಲ್ಲೆಲ್ಲಿಂದಲೋ ಒಟ್ಟುಗೂಡಿ ತಮ್ಮ ಪಾಡಿಗೆ ತಾವು ಹೆಪ್ಪುಗಟ್ಟಿ ಭಾರ ತಾಳಲಾರದೇ ಮಳೆಯಾಗಿ ಇಳೆಯ ಮಡಿಲು ಸೇರುವುವುವಲ್ಲವೆ! ಮೌನಕೂ ಮಾತಿಗೂ ಮನಸ್ಸಿನದೇ ಹಂಗು ನಿಜ ನಾಟಕದ ಮಧ್ಯದಲಿ ಸೂತ್ರಧಾರನ ಕಪಟ ನಾಟಕ ಮುಂದಡಿಯಿಡುವುದೇ ಮನಸ್ಸು ಮಾತುಗಳನು ಪ್ರಚಂಡ ಪ್ರವಾಹವಾಗಿಸಲು! ಮೌನದ ಅಣೆಕಟ್ಟನು ಸಿಡಿಸಿ ಚೂರಾಗಿಸಲು!?