Posts

Showing posts from 2013

ತ್ಯಾಜ್ಯದಿಂದ ವಿದ್ಯುತ್ - ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಶಾಶ್ವತ ಪರಿಹಾರ?

ಕಸದಿಂದ ರಸ ತೆಗೆಯುವ ಅನೇಕ ವಿಧಾನಗಳು ನಮಗೆ ಪರಿಚಿತ. ಆದರೆ ಕಸದಿಂದ ವಿದ್ಯುತ್ ಕೂಡ ತಯಾರಿಸಬಹುದೆಂದು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಾರದು. ಇಲ್ಲಿ ಕಸ ಎಂದರೆ ಯಾವುದೋ ಒಂದು ಬಗೆಯ ಕಸ ಮಾತ್ರವಲ್ಲ. ಬೆಂಗಳೂರಿನ ಸದ್ಯದ ಕಸ ವಿಲೇವಾರಿ ಸಮಸ್ಯೆಯಿಂದ ಅಲ್ಲಲ್ಲಿ ತಿಪ್ಪೆಗಳಾಗಿ ರಾಶಿ ರಾಶಿಯಾಗಿ ಕಾಣಸಿಗುವ ಒಣ ಮತ್ತು ಹಸಿ ಮಿಶ್ರಿತ ತ್ಯಾಜ್ಯ, ಕೈಗಾರಿಕಾ ಕಸ, ಜೈವಿಕ ತ್ಯಾಜ್ಯ, ಪ್ಲಾಸ್ಟಿಕ್ ಇನ್ನೂ ಹಲವು ಬಗೆಯ ತ್ಯಾಜ್ಯ - ಇವೆಲ್ಲವುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ "ಅನಿಲೀಕರಣ" ತಂತ್ರಜ್ಞಾನ ಲಭ್ಯವಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನೇ ದೊಡ್ಡದಾಗಿಸಿಕೊಂಡು ಬೆಂಗಳೂರಿನ ಬಿ.ಬಿ.ಎಂ.ಪಿ ಒದ್ದಾಡುತ್ತಿರುವಾಗ, ಪುಣೆಯಲ್ಲಿ ತ್ಯಾಜ್ಯದ ಅನಿಲೀಕರಣದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿತಗೊಂಡು ಅದರಿಂದ ವಿದ್ಯುತ್ ಸರಬರಾಜಾಗುತ್ತಿದೆ. ತ್ಯಾಜ್ಯ ವಿಂಗಡನೆ, ವಿಸರ್ಜನೆಗಳ ಸುತ್ತ ಎದ್ದಿರುವ ಸಮಸ್ಯೆಗಳ ಭರಾಟೆಯಲ್ಲಿ, ಇದಕ್ಕೆ ಸರಿಯಾದ ಪ್ರಚಾರವಿಲ್ಲದೆ, ಸರ್ಕಾರವೂ ಈ ನಿಟ್ಟಿನಲ್ಲಿ ಚಿಂತಿಸದೇ ಇದು ಬೆಳಕಿಗೆ ಬರದಿರುವುದು ವಿಪರ್ಯಾಸದ ಸಂಗತಿ. ಈ ತಂತ್ರಜ್ಞಾನವನ್ನು ಅವಲೋಕಿಸುವ ಮುನ್ನ ತ್ಯಾಜ್ಯ ನಿರ್ವಹಣೆಗೆ ಈಗ ಬಿ.ಬಿ.ಎಂ.ಪಿ ಅನುಸರಿಸುತ್ತಿರುವ ವಿಧಾನದಲ್ಲಿರುವ ಸಮಸ್ಯೆ, ಕೊರತೆ ಹಾಗೂ ಸವಾಲುಗಳನ್ನು ಗಮನಿಸೋಣ. ತ್ಯಾಜ್ಯ ನಿರ್ವಹಣೆಗಾಗಿ ಸದ್ಯ ಬಳಕೆಯಲ್ಲಿರುವ ಪ್ರಕ್ರಿಯೆ ಹೀಗಿದೆ: 1. ಪ್ರತಿ ವಾರ್ಡ್‍ನ ಪ್ರತಿ

ನಿರೀಕ್ಷೆ

ಮೂಡಬೇಕಿದೆ ಒಡಮೂಡಬೇಕಿದೆಯಿನ್ನು ನನ್ನ ನಿನ್ನ ಸಹಯಾನದ ಹಾಡಿನಲಿ ಎದೆಯ ತುಂಬಿಸುವ ನವಪಲ್ಲವ ಬೇಗೆ ತಣಿಸುವ ಮಾರ್ದವ ಹಾಯಬೇಕಿದೆ ಒಳಹಾಯಬೇಕಿದೆಯಿನ್ನು ನನ್ನ ನಿನ್ನ ಅಂತರಂಗದಂಗಳದಲಿ ಹೊನ್ನ ಲೇಪದ ನಲ್ಬೆಳಕು ದುಗುಡ ಕರಗಿಸುವ ತಿಳಿಬೆಳಕು ಬರಬೇಕಿದೆ ತೇಲಿಬರಬೇಕಿದೆಯಿನ್ನು ನನ್ನ ನಿನ್ನ ಕಣ್ಣ ಕೊಳದಲಿ ಮುದ್ದು ಬಳುಕಿನ ಹಣತೆ ಸಾಲು ಎಲ್ಲ ಕನಸುಗಳ ಹೊಳಹಿನ ಪಾಲು

ಆ ಮೊದಲ ಉಳಿ ಪೆಟ್ಟು

ಎದುರಾಗಿದ್ದಾರೆ ಒಬ್ಬರಿಗೊಬ್ಬರು ಸುರಿವ ಬಿಸಿಲಲಿ ತೊಯ್ದ ಕಲ್ಲಿನ ಗಟ್ಟಿ ಉಳಿಯಲಿ ಕಲ್ಲನುಲಿಸುವ ಸಂಕಲ್ಪದಲಿ ಶಿಲ್ಪಿ ದಿಟ್ಟಿಸುತ್ತಿದ್ದಾನೆ ಕಲ್ಲನು ಶಾಂತವಾಗಿ ಉಲಿಯುತ್ತಿದ್ದಾನೆ ಏನೋ ನಿವೇದನೆಯ ತೆರದಿ ಕಲ್ಲೂ ಆಲಿಸುತ್ತಿದೆ ಮಾಂತ್ರಿಕ ಸ್ಪರ್ಶದ ಮಾತು ದೂರ ಅವನ ಸಮಕ್ಷಮವೇ ಸಾಕು! ನಿರ್ಜೀವ ಕಲ್ಲಲೂ ಹುಟ್ಟಿದೆ ಒಪ್ಪಗೊಂಡು ಭಾವ ಭಂಗಿಗಳ ಅವತಾರವೆತ್ತುವ ಬಯಕೆ ಶಿಲ್ಪಿಯ ಹಣೆ ಬೆವರುತಿದೆ ಕಲ್ಲು ಕಂಪಿಸುತಿದೆ ಉಸಿರು ಹಿಡಿದು ಒಮ್ಮೆಗೆ ನೇವರಿಸಿದ್ದಾನೆ ಕಲ್ಲನು ನಡುವೆ ಗಾಳಿ ಹಾಯಲು ಅವನೆದೆಗೆ ತಾಕಿದೆ ಸುಡುಗಲ್ಲಿನ ಅಂತರಂಗದ ತಂಪು ಕಲ್ಲಿಗಿನ್ನಾವ ಗಮ್ಯವಿಲ್ಲ ಶರಣಾಗಿದೆ ಶಿಲ್ಪಿಗೆ ನೋವುಣಿಸುವವನೂ ಅವನೆ ಒಡಲಲಿ ಹೂವರಳಿಸುವವನೂ ಅವನೆ ನಂಬುಗೆಯಲಿ ಕಣ್ಮುಚ್ಚಿ ಮೈಯ್ಯೊಡ್ಡಿದೆ ಹೇಗೆ ಅರಿತನೋ ಶಿಲ್ಪಿ! ಆ ಮೊದಲ ಉಳಿಯ ಪೆಟ್ಟಿಗೆ ಕಲ್ಲ ಒಡಲ ಜೀವೋನ್ಮೀಲಿತಗೊಳಿಸುವ ರಸಬಿಂದು ಯಾವುದೆಂದು! ಚಿಮ್ಮಿದೆ ಚಕ್ಕಳದ ಚೂರು ನೋವಿನ ನಲಿವಲಿ ಶಿಲ್ಪವಾಗುತಿದೆ ಕಲ್ಲು