ಇಬ್ಬನಿಯ ಹನಿಗಳು

ಅಬ್ಬರವಿದ್ದರೂ ಹೂಹೃದಯದ ಹುಡುಗ ಅಜಯ್ ಸರಳ, ಗಂಭೀರ ಮಾತಾಡಿದರೂ ಮಾತಾಡದ ಚೇತನ ಮಂದಹಾಸಕ್ಕೆ ಇನ್ನೊಂದು ಹೆಸರು ನಾಗಶ್ರೀ ಮುಗ್ಧ ಕಂಗಳ ಮೃದುಲ ಮನಸಿನ ರಮ್ಯ ಮಿತಭಾಷಿಯಾದರೂ ನಕ್ಕು ನಗಿಸುವ ವಿಶ್ವಾಸ್ ಗೆಳೆತನದ ಮೊಗ್ಗರಳಿಸಿ ದೂರಾಗಿ ದೂರದಿಂದಲೇ ಕಂಪು ಸೂಸುವ ಸಂಧ್ಯಾ ಲವಲವಿಕೆಯ ಚಿಲುಮೆ ಚಟಪಟ ಮಾತಿನ ರೇಖಾ ಕೇಳಲು ಹಿತವಾದ ಹೆಸರುಳ್ಳ ಸುಕುಮಾರಿ ಮಂಗಳ ಗೌರಿ ಶ್ವೇತ ವರ್ಣ ಶುಭ್ರ ಮನ ಹೆಂಗೆಳೆಯರ ಕಣ್ಮಣಿ ಶಿವಾಜಿ ಅರಿತು ಬೆರೆತು ಎಲ್ಲರೊಳಗೊಂದಾಗುವ ಶ್ರೀಜಿತ್ ತಂಪೆರೆದು ತನುಮನಗಳ ತಣಿಸುವ ತಂಗಾಳಿ ಅನಿಲ ಒಬ್ಬರಿಂದೊಬ್ಬರು ಅಗಲಿದ ಕ್ಷಣಗಳು ಬಿರು ಬಿಸಿಲಿನ ಸುಡು ಸುಡುವ ಕೆನ್ನಾಲಿಗೆಗಳಂತೆ ಕೂಡಿ ಸಂಭ್ರಮಿಸಿ ಕಳೆದ ಘಳಿಗೆಗಳು ಹಸಿರೆಲೆಯ ಚುಂಬಿಸುವ ಇಬ್ಬನಿಯ ಹನಿಗಳಂತೆ ಸವಿದಷ್ಟೂ ಸಿಹಿಯಾಗುವ ಮಧುರ ನೆನಪುಗಳು ಬಾಳ ಮುಸ್ಸಂಜೆಯವರೆಗೂ ಜೊತೆಬಿಡದ ವಜ್ರಗಳಂತೆ