ನನ್ನ ಪ್ರಶ್ನೆ

ನಾನೇನು ಬಲ್ಲೆನು?
ಬಲ್ಲೆನೆಂದು ಹೇಳುವುದ ಬಿಟ್ಟು
ಅರೆಪಾವು ವಿದ್ಯೆ, ಚಟಾಕು ತಿಳುವಳಿಕೆ
ಆತ್ಮವಿಮರ್ಶೆ, ಅದೇನದು?
ನಾನೇನು ಬಲ್ಲೆನು?
ಜಾಡಿಸಿ ತೊಳೆದರೂ ಮರುಕಳಿಸುವುದು
ಮನದ ಕೋಣೆಯಲ್ಲಿ ಗರ್ವದ ಧೂಳು
ಬೆಸೆದುಕೊಂಡಿದೆ ಅಹಮ್ಮಿನ ಬಲೆಯೊಡನೆ
ಪರರ ಹೊಗಳಲು ಭುಗಿಲೇಳುವುದು ಮತ್ಸರ
ಬಲ್ಲೆನೆಂದು ನಾ ನನಗೇ ಹೇಳಿಕೊಳ್ಳುವ ಸುಳ್ಳು
ನುಡಿಯು ಮಾರುದ್ದ ನಡೆಯು ಗೇಣುದ್ದ
ನುಡಿಯ ನಡೆಸಬಲ್ಲೆನೆ?
ನಾನೇನು ಬಲ್ಲೆನು?
ಬೇಕಾಗಿದೆಯೊಂದು ಮಾಯಾದರ್ಪಣ
ಮನದ ಮುಖವ ನೋಡಲು
ಅದರ ಕೋರೆಗಳ ಕಾಣಲು
ವಿಕೃತಿಗಳ ಎತ್ತಿ ತೋರಿಸಲು
ಆಗಿಬಿಡಲಿ ಭ್ರಮನಿರಸನ
ಹುಚ್ಚು ಮನಸಿನ ರೂಪದರ್ಶನ
ಅದೆಲ್ಲಿರುವುದು ದರ್ಪಣ?
ನಾನೇನು ಬಲ್ಲೆನು?

Comments

en sir ishtondu gambheeravaagi baritira.chennagide:)

Popular posts from this blog

ಮಾತು-ಮೌನ-ಮನಸ್ಸು

ಬೀದಿ ಬದಿಯ ಬಾಣಸಿಗ

ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು