ಕನಸಿನ ಕೊಡೆ

ಗುಂಡಿಯೊತ್ತಿದರೆ ಸಾಕು
ಛಕ್ಕನೆ ತೆರೆದುಕೊಳ್ಳುತ್ತಿ
ಬರಿ ಅಷ್ಟೇ ಅಲ್ಲ!
ನನ್ನ ಪಾಲಿನ ಪುಟ್ಟದೊಂದು ಆಗಸ ತೆರೆದಿಡುತ್ತಿ
ಮಳೆ ಹುಯ್ದರಂತೂ ನಿನ್ನ ಮೈ ತುಂಬಾ
ಹಿತವಾದ ಚಿಟಪಟ ಸದ್ದು
ನಿನ್ನ-ಹನಿಗಳ ನಡುವೆ ಶುರುವಾಗುವುದು
ಮುದ್ದು ಮಾತುಗಳ ಸಲ್ಲಾಪ
ಸುತ್ತಣ ಜಗವೆಲ್ಲ ಮಸುಕಾಗುವುದು
ಹೌದು ನೋಡು. ನೀನೆ ಒಂದು ಆಕಾಶ
ಚಂದಿರನಿಲ್ಲ ತಾರೆಗಳಿಲ್ಲವಾದರೂ
ನನ್ನ ಕನಸುಗಳಿವೆಯಲ್ಲ
ಒಂದೊಂದಾಗಿ ಪೇರಿಸಿಡುವೆ ಅಲ್ಲಲ್ಲಿ
ಮತ್ತೆ ಸುಮ್ಮನಾಗಿ ನೋಡಿದರೆ
ಫಳಫಳನೆ ಹೊಳೆವುವು
ಹಾಗೇ ಮಡಸಿಟ್ಟರೆ
ನನ್ನ ಕನಸುಗಳೆಲ್ಲವೂ ನಿನ್ನ ಮಡಿಲಲ್ಲಿ ಜೋಪಾನ
ಮೋಡ ಹನಿದರೆ ಬಿಸಿಲು ಉರಿದರೆ ಮಾತ್ರ
ನಿನ್ನ ತೆರೆಯಬೇಕೆನ್ನುವರು ಎಲ್ಲ
ಪಾಪ! ಅವರೇನು ಕಂಡಾರು
ನಿನ್ನೊಳು ನಾ ಬಚ್ಚಿಟ್ಟಿರುವ
ಅಷ್ಟೂ ಕನಸುಗಳನ್ನ!!

Comments

ಚೆನ್ನಾಗಿದೆ...
Pramod P T said…
ಬಚ್ಚಿಟ್ಟಿರುವ ನಿಮ್ಮೆಲ್ಲಾ ಕನಸುಗಳು ಅದೇ ಪುಟ್ಟ ಆಗಸದಲ್ಲಿ ಜೋಪಾನವಾಗಿರಲಿ :)
ನನ್ನ ಆಶಯಕ್ಕೆ ಸ್ಪಂದಿಸಿದ್ದಕ್ಕೆ ಧನ್ಯವಾದಗಳು :)

Popular posts from this blog

ಮಾತು-ಮೌನ-ಮನಸ್ಸು

ಬೀದಿ ಬದಿಯ ಬಾಣಸಿಗ

ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು