"ಗಳು ಗಳು" ಪಂಚರಂಗಿ ಅನಿಸಿಕೆ"ಗಳು"ಕ್ರಿಯಾಪದವೇ ಇರದ "ಗಳು ಗಳು" ಎಂಬ ಉದ್ದುದ್ದ ಕವಿತೆಯ ವಿಸ್ತೃತ ರೂಪಗಳು, ಪಂಚರಂಗಿಯ ಚಿತ್ರಕಥೆಯ ಎಳೆಗಳು, ದಿಗಂತನ ೨ಕಿಲೋ ದೂಧ್ ಪೇಡಾ ನಗೆಗಳು, ನಿಧಿ ಸುಬ್ಬಯ್ಯಳ ನುಲಿದಾಟದ ನಡುವಿನ ಅಭಿನಯಗಳು, ವಿಪರೀತ ಮೊನಚು ಮಾತುಗಳು, ಕೊನೆಯಲ್ಲಿ ಪೂರ್ಣವಿರಾಮದ ಬದಲಿಗೆ ಪಂಚುಗಳು, ಕಥಾನಾಯಕನ ಅಡ್ಡಕಸುಬಿ ವೃತ್ತಿಗಳು, ಎಲ್ಲರ ಕಣ್ಣಿಗೆ ಕಾಲಕಸಗಳು, ಆದರೂ ಬಾಯ ತುಂಬಾ ಸರಳ ತತ್ವಗಳು, ಜಗತ್ತಿಗೊಂದಿಷ್ಟು ಉಡಾಫೆಗಳು ಮತ್ತೊಂದಷ್ಟು ಮೂದಲಿಕೆಗಳು, ಹುಡುಗಿಯರ ಕಾಲೆಳಿಯುವ ಕಿಸಿಕಿಸಿ ವಿಟ್ಟುಗಳು, ಅವರ ಮದುವೆಯ ರಿಕ್ವೈರ್ಮೆಂಟುಗಳು, ತಂದೆ ತಾಯಂದಿರ ಉಗಿತಗಳು, ಹುಡುಗಿಯರ ಎಳಸು ಆಟಗಳು, ನೆಗೆ ನೆಗೆದು ಬರುವ ನಗಿಸಿ ನೆಗೆಸುವ ಗೂಢಾರ್ಥದ ಜೋಕುಗಳು, ಹಿನ್ನೆಲೆಯಲ್ಲಿ ಭಟ್ಟರ ಹ್ಞೂಂ ಕಾರಗಳು, ದಿಗಂತನ ಮುಖದ ಕಿವುಚುಗಳು, ನಿಧಿಯ ಮುರುಕು ಕನ್ನಡ ಪದಗಳು, ಜಯಂತರ ಚೊಚ್ಚಲ ಅಭಿನಯದಲ್ಲಿ ಕಿರುನಗೆಯ ಹೊಳಪುಗಳು, ಸರಿದಾಡಿವೆ ಹಾಡುಗಳಲಿ ನೂತನ ರೂಪಕಗಳು, ಸೀರೆಗಳನು ನೇಯ್ದ ಬೆಳಕುಗಳು, ಕಣ್ಣಲಿ ಗೋಚರಿಸಿದ ಕಾಗುಣಿತಗಳು, ಇಡೀ ಎರಡುವರೆ ತಾಸು ಅಲ್ಲಲ್ಲಿ ಇಣುಕುವುವು ಬದುಕಿನ ಲಿಮಿಟ್ಟುಗಳು, ಪರೀಕ್ಷೆಯ ಫಲಿತಾಂಶದಂಥ ಮಧ್ಯಂತರಗಳು, ಮೈ ಮುರಿಯುವ ಟಾಕೀಸ್ ಸೀಟುಗಳು, ಟೆಲಿಗ್ರಾಮಿನಂತೆ ಎರಗಿಬಿಡುವ ಕಥೆಯ ತಿರುವುಗಳು, ಸಮುದ್ರದ ಅಲೆಗಳು, ತೀರದಲಿ ಮರಳುಗಳು, ಮರಳಿನಲಿ ಗಜಿ ಬಿಜಿ ಮಾತುಗಳು, ಕಿರಿ ಕಿರಿಗಳು, ಕಂಯ ಕಂಯಗಳು, ಖೊ ಖೊ ಖೊಗಳು, ಗುಂಡಿ ತೋಡಿದ ಸಂತನ ಜೀವನ ಪಾಠಗಳು, ತ್ರಿಪದಿಯ ಗಾಯನಗಳು, ಲೈಫಿನ ವ್ಯಾಖ್ಯಾನಗಳು, ಮನೆಕೆಲ್ಸದವಳ ಇಂಗ್ಲೀಷಿನ ತಿರುಗು-ಮುರುಗುಗಳು, ವಾಸ್ತು ಶಾಸ್ತ್ರಗಳು, ಕಾಮಿ ಸ್ವಾಮಿಗಳು, ತಲೆ ಕೆಳಗೆ ಕಾಲು ಮೇಲಾದ ಡೈಲಾಗು ಗಳು, ನೇರ ರಸ್ತೆಗಳು, ಅಡ್ಡ ದಾರಿಗಳು, ತೆಂಗಿನ ಮರಗಳು, ಹರಟೆಹೊಡೆಯುವ ಸರ್ಕಸ್ಸುಗಳು, ಅಡ್ಡಾ ದಿಡ್ಡಿ ಗೆರೆಗಳು, ಬಿಡಿ ಬಿಡಿ ರೇಖಾಚಿತ್ರಗಳು, ಮಿನುಗುವ ಸಂಧಿಯ ಬಿಂದುಗಳು, ಡಿಫರೆಂಟು ಸಂಗೀತಗಳು, ಬ್ಯಾಕ್ ಗ್ರೌಂಡು ಸ್ಕೋರುಗಳು, ಸಿಡಿಲಿನಂಥ ಟ್ವಿಸ್ಟುಗಳು, ಗಂಭೀರ ದೃಶ್ಯಗಳು, ಅಪ್ಪ ಅಮ್ಮಂದಿರ ಸೋಗಲಾಡಿತನಗಳು, ಮಕ್ಕಳ ತೊಳಲಾಟಗಳು, ಫಾರೀನು ಕೆಲಸಗಳು, ಲವ್ ಸ್ಯಾಕ್ರಿಫೈಸುಗಳು, ವೇಸ್ಟು ಡಿಗ್ರಿಗಳು, ಸಿಂಪಲ್ ಮ್ಯಾರೇಜುಗಳು, ಮಕ್ಕಳಾಗುವ ಭೀತಿಗಳು, ಪ್ರಿಮೆಚೂರ್ ಡೆಲಿವರಿಯಂಥ ಪ್ರೇಮಾಂಕುರಗಳು, ಬಡಬಡಿಸುವ ನಿವೇದನೆಗಳು, ಹೀರೋನ ನೆಗ್ಲಿಜೆಂನ್ಸುಗಳು, ಕಪಾಳಮೋಕ್ಷಗಳು, ಬಿಕ್ಕಳಿಸುವ ಹೆಣ್ಮನಗಳು, ದಡ್ಡ ಬಿದ್ದು ಹೋಗಿರುವ ಗಂಡ್ಮನಗಳು, ಎಲ್ಲಾ ಮುಗಿಯಲು ನಾಯಕನ ಗೊಂದಲಗಳು, ಫಳ ಫಳ ಥೇಟರು ದೀಪಗಳು, ಅರಳುವುವು ಕಣ್ಣುಗಳು, ತಲೆಯ ಕೆರೆವ ಕೈ ಬೆರಳುಗಳು, ಲೈಫ಼ು ಇಷ್ಟೇನೆಗಳು. ಲೈಫ಼ು ಹಿಂಗೇನೆಗಳು.

Comments

nanu kuda film nodidae tumba channagidae...nimma baravanigae kuda

Popular posts from this blog

ಮಾತು-ಮೌನ-ಮನಸ್ಸು

ಬೀದಿ ಬದಿಯ ಬಾಣಸಿಗ

ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು