Saturday 31 July 2010

ಒಡೆದ ಹಾಲು

ಅಸುನೀಗಿವೆ ಸಿಹಿಯ ಕಣಗಳು
ಒಣಗಿ ತೇಲಿದೆ ಕೆನೆಯ ಬನಿ
ಮೈಯ್ಯ ತುಂಬಾ ತರಚು ಗಾಯಗಳು
ಬಿಸಿಯ ನೀಡ ಹೋದದ್ದೇ ಶುರು
ಕೊತಕೊತನೆ ಪಾತ್ರೆಯನೆ ನಡುಗಿಸುವ ಕಂಪನ!
ಒಡೆದ ಹಾಲು ನೊಂದು ರೋದಿಸುತಲಿದೆ
ಇನ್ನಿಲ್ಲವಾದ ಸವಿಯ ನೆನೆದು ದುಃಖತಪ್ತವಾಗಿದೆ
ಉಬ್ಬಿ ಬಂದ ಹರುಷವ
ಎತ್ತೆಸೆದು ಕೆನೆಯ ತೆಕ್ಕೆಯಲಿ ತೊನೆದು
ಮತ್ತೆ ಮಡಿಲ ತುಂಬಿಸಿಕೊಳ್ಳುವ
ಸಂಭ್ರಮಕಿಲ್ಲ ಎಡೆ
ಇನ್ನೆಲ್ಲಿದೆ ಮಮತೆಯ ಕಾವು!
ಬಿಗಿದಪ್ಪಿದ ಪಾತ್ರೆಗಿನ್ನು ಜಿಗುಪ್ಸೆ
ಆವಿಯಾಗುತಲಿದೆ ಹಾಲಿನ ಕೊನೆಯುಸಿರು
ಎದೆಬಡಿತ ನಿಂತು ಹುಳಿಯ ಕಳೆಯೊಂದು
ಚಿಗುರೊಡೆದು ನಂಜಾಗಿಸಿದೆ ಮೈಯನು

ಇದನ್ನು ಕೆಂಡಸಂಪಿಗೆಯಲ್ಲಿ ಓದಲು...

2 ಪ್ರತಿಕ್ರಿಯೆ(ಗಳು):

Pramod P T said...

ಆಹಾ! ಅದೇಷ್ಟ್ ಚೆನ್ನಾಗ್ ಬರಿತೀರಿ ಕಿರಣ್!!

ಸೂರ್ಯಕಿರಣ್ ಜೋಯಿಸ್ said...

ಧನ್ಯವಾದಗಳು ಪ್ರಮೋದ್!!!